ಊರುಬಾಡು ಬೇನೆ
	ಏಕಾಣು ಜೀವಿಯಾದ ಊರುಬಾಡು ಕದಿರುಜೀವಿ (ಕ್ಲಾಸ್ಟ್ರಿಡಿಯಂ ಬಾಟುಲೈನಂ) ಹೊರಡಿಸುವ ಜೀವವಿಷದ (ಟಾಕ್ಸಿನ್) ಸೇವನೆಯಿಂದ ಆಗುವ ಒಂದು ಬಗೆಯ ಆಹಾರವಿಷ (ಬಾಟುಲಿಸಂ). ಆಹಾರ ಕೆಡದಂತಿರಿಸಲು ಡಬ್ಬಿ ತುಂಬುವಾಗ ಸಾಕಷ್ಟು ಎಚ್ಚರ ಇಲ್ಲವಾದರೆ ಆಗುವ ಅಪಾಯಕರ ಸೋಂಕಿದು. ಈ ರೋಗ ಹತ್ತಿದವರಲ್ಲಿ ಬಹಳ ಮಂದಿ ಸಾಯುವರು. ರುಚಿ, ವಾಸನೆ ಕೆಟ್ಟಿರುವ ಡಬ್ಬಿ ಆಹಾರವನ್ನು ಬಳಸದಿರುವುದೇ ಇದನ್ನು ತಪ್ಪಿಸುವ ಮುಖ್ಯ ಉಪಾಯ. ಆಹಾರ ಸೇವಿಸಿದ (ನೋಡಿ- ಆಹಾರ-ವಿಷವೇರಿಕೆ,-ಏಕಾಣುಜೀವಿಕ) 12-30 ಗಂಟೆಯೊಳಗೆ ವಿಷಲಕ್ಷಣಗಳು ಪ್ರಕಟವಾಗುತ್ತವೆ. ಬಾಟುಲೈನಂ ವಿಷಕ್ಕೆ ಒಳಗಾದವರಿಗೆ ತುರ್ತಾಗಿ ಬಾಟುಲೈನಂ ಪ್ರತಿ ವಿಷ ನೀಡಿ ಚಿಕಿತ್ಸಿಸುತ್ತಾರೆ.
						               
 (ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ